
ಕಲರವ – ಮೇ 28. 2019 ರ ಸಂಚಿಕೆ.
ಈ ಸಂಚಿಕೆಯಲ್ಲಿ ಮಕ್ಕಳು, ದೇಶ ವಿದೇಶಗಳ ಮಾಹಿತಿ ನೀಡುವ ಸರಣಿ ಸಂಚಿಕೆ, ಭಕ್ತಿಗೀತೆಗಳು ಹಾಗೂ ಶ್ಲೋಕ ಗಳನ್ನೂ ಪ್ರಸ್ತುತ ಪಡಿಸಿದ್ದಾರೆ.ಭಾಗವಹಿಸಿದ ಮಕ್ಕಳು: ಆಶೀಶ್ ಸತ್ತೂರ್| ನಿತ್ಯಶ್ರೀ| ಸುಜಯ್ |ಏಕ್ತಾ ಕರ್ಪೂರ |ಸೃಷ್ಟಿ ಕೆ
ಈ ಸಂಚಿಕೆಯಲ್ಲಿ ಮಕ್ಕಳು, ದೇಶ ವಿದೇಶಗಳ ಮಾಹಿತಿ ನೀಡುವ ಸರಣಿ ಸಂಚಿಕೆ, ಭಕ್ತಿಗೀತೆಗಳು ಹಾಗೂ ಶ್ಲೋಕ ಗಳನ್ನೂ ಪ್ರಸ್ತುತ ಪಡಿಸಿದ್ದಾರೆ.ಭಾಗವಹಿಸಿದ ಮಕ್ಕಳು: ಆಶೀಶ್ ಸತ್ತೂರ್| ನಿತ್ಯಶ್ರೀ| ಸುಜಯ್ |ಏಕ್ತಾ ಕರ್ಪೂರ |ಸೃಷ್ಟಿ ಕೆ
ಈ ಸಂಚಿಕೆಯಲ್ಲಿ ನಂದಾ ಗಾರ್ಗೆ ಇವರು ಬರೆದಂತಹ “ಅನಿಂದಿತ” ಎಂಬ ಕಥೆ ಪ್ರಸಾರಗೊಳಿಸಲಾಗಿದೆ. ಅಕ್ಕನ ಮತ್ಸರ ಅವಳ ಓದನ್ನು ನಿಲ್ಲಿಸಿತಲ್ಲದೆ ಮದುವೆಯನ್ನು ಮರೀಚಿಕೆಯಂತೆ ಮಾಡಿತು. ಜೊತೆಗೆ ಭಾವನ ಚಾರಿತ್ರ್ಯ ವಧೆ, ಅವಳ ಮುಗ್ಧತೆಯ ಕೊಲೆಯೂ ನಡೆದು ಹೋಗಿತ್ತು. ಹಾಗಾದರೆ ನಾಡಿದ್ದೇನು ? ಆಲಿಸಿರಿ ಅನಿಂದಿತ ಕಥೆ.ಪ್ರಸ್ತುತಿ ಶ್ರೀಮತಿ,ಉಮಾ ಭಾತಖಂಡೆ
ಈ ಸಂಚಿಕೆಯಲ್ಲಿ ಪ್ರಸಾರಗೊಂಡ ಕಥೆಗಳು: 1 ತಮಟೆ 2 ರಾಜಕುಮಾರಿಯ ಪ್ರಶ್ನೆ. ೧. ತಮಟೆ ಕಥೆಯಲ್ಲಿ -ರಾಮು ೨ ಕಟ್ಟಿಗೆ ತುಂಡಿನಿಂದ ಹ್ಯಾಂಗ ತಮಟೆ ಪಡೆದ ಅಂತ ಕೇಳ್ರಿ . ೨. ರಾಜಕುಮಾರಿಯ ಪ್ರಶ್ನೆ – ಇದರಲ್ಲಿ ರಾಜಕುಮಾರಿಯ ಪ್ರಶ್ನೆಗೆ ಸಮಂಜಸವಾಗಿ ಉತ್ತರ ನೀಡಿದ ಆ ರಾಜಕುಮಾರ ಯಾರು ಅಂತ ನೀವೇ ಆಲಿಸಿರಿ. ಮೇ, 26, 2019ರ ಸಂಚಿಕೆ ಪ್ರಸ್ತುತಿ : ಉಮಾ ಭಾತಖಂಡೆ.
ಈ ಸಂಚಿಕೆಯಲ್ಲಿ ಮೌರ್ಯ ಸಾಮ್ರಾಜ್ಯದ ಕುರಿತು ಪ್ರಾರಂಭಿಕ ಹಂತಗಳನ್ನು ತಿಳಿಸಲಾಗಿದೆ.
ಈ ಸಂಚಿಕೆಯಲ್ಲಿ ಮಕ್ಕಳು ಭಾಷಣ, ಹಾಡು, ನಿಸಾರ್ ಅಹಮ್ಮದ್ ಅವರ ಪದ್ಯ, ಗಣೇಶ ಶ್ಲೋಕ ಮತ್ತು ದೇಶವಿದೇಶಗಳ ಮಾಹಿತಿ ಸರಣಿ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಮಕ್ಕಳು : ಕೃತಿಕಾ | ನಿವೇದಿತಾ ನಿಲಣ್ಣವರ | ಪ್ರಣತಿ | ಶೀತಲ್ ಜೋಶಿ | ಸ್ಫೂರ್ತಿ | ಆಶೀಶ್ ಸತ್ತೂರ | ತ್ರಿಷಾ
ಭಾವಪುಷ್ಪದ ೨೫ ನೇ ಸಂಚಿಕೆಯನ್ನು ಪೂರೈಸಿದ ಈ ಸಂಚಿಕೆಯಲ್ಲಿ ಮುಂಗಾರು, ಓ ಭಾವಪುಷ್ಪ, ಓ ತಾವರೆ, ಭಾವಪುಷ್ಪ, ಚಕ್ರವ್ಯೂಹ ,ಸುಂದರಾಂಗನ ಒಲವು, ರಂಗೋಲಿಯ ಚಿತ್ತಾರ, ಹಾಗೂ ಮಹಿಳಾದಿನಾಚರಣೆ ಎಂಬ ವಿಶೇಷ ಕವನಗಳನ್ನು ವಾಚಿಸಲಾಗಿದೆ. ಭಾಗವಹಿಸಿದ ಕವಿ ಮನಗಳು: ರಾಧಾ ಶ್ಯಾಮರಾವ್, ವಿಜಯ್ ಇನಾಂದಾರ್, ರಜನಿ ಕುಲ್ಕರ್ಣಿ, ಅಶ್ವಿನಿ ಕಷಿಕರ್, ಅಜಿತ್ ಕುಲ್ಕರ್ಣಿ, ಅನುರಾಧ ಕುಲ್ಕರ್ಣಿ, ಇಂದುಮತಿ ರಾಘವೇಂದ್ರ,ಶ್ಯಾಮಲಾ ಕುಲ್ಕರ್ಣಿ, ಮಾಲತಿ ಮುದಕವಿ ಹಾಗೂ ಉಮಾ ಭಾತಖಂಡೆ.
1916 ರಲ್ಲಿ ಬನಾರಸ್ ವಿಶ್ವವಿದ್ಯಾಲಯ ನಿರೂಪಿಸಿದ,ಮಹಾತ್ಮಾ ಗಾಂಧಿಯ ಹಿರಿಯಣ್ಣ ಎಂದೇ ಪ್ರಸಿದ್ಧರಾದ ಮದನ್ ಮೋಹನ್ ಮಾಳವಿಯ ಇವರ ಕುರಿತ ಮೇ 22, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ಈ ಸಂಚಿಕೆಯಲ್ಲಿ ಮಕ್ಕಳು ಸಂಸ್ಕೃತ ಶ್ಲೋಕ, ಯು ಆರ್ ಅನಂತಮೂರ್ತಿ ಇವರ ಕುರಿತು ಭಾಷಣ, ಬಸವೇಶ್ವರರ ವಚನ ಮತ್ತು ಕಥೆಗಳನ್ನು ಪ್ರಸ್ತುತಪಡಿಸಿದ್ದಾರೆ.ಭಾಗವಹಿಸಿದ ಮಕ್ಕಳು – ಧರಣಿದೇವಿ ತೋಡ್ಕರ್ | ಶ್ರೇಯಸ್ ಆರ್ | ನಿಶ್ಚಿತ | ಆದರ್ಶ್ ಆರ್ | ಕೃತಿಕಾ.
ಈ ಸಂಚಿಕೆಯಲ್ಲಿ ನಂದಾ ಗಾರ್ಗೆ ಇವರು ಬರೆದಂತಹ “ವೈರಸ್” ಎಂಬ ಕಥೆ ಪ್ರಸಾರಗೊಳಿಸಲಾಗಿದೆ. ಮ್ಯಾರೇಜ್ ಬ್ಯುರೋದ ವೆಬಸೈಟ್ನಲ್ಲಿದ್ದ ಗಂಡಿನ ವಿವರಗಳು, ಮಾಡುವೆ ಬಗ್ಗೆ ಅವನಿಗಿದ್ದ ಅಭಿಪ್ರಾಯಗಳು ಎಷ್ಟು ಆಕರ್ಷಕ ವಾಗಿದ್ದವೆಂದರೆ ಮಾಡುವೆ ಹೂವಿನ ಸರ ಎತ್ತಿದಂತೆ ಸಲೀಸಾಗಿ ನಡೆದು ಹೋಗಿತ್ತು. ಆದರೆ, ಮುಂದೆ ಏನಾಯಿತು ಎಂಬುದು ಈ ಕಥೆಯಲ್ಲಿ ಕೇಳಿ ಆನಂದಿಸಿ.ಪ್ರಸ್ತುತಿ ಶ್ರೀಮತಿ,ಉಮಾ ಭಾತಖಂಡೆ.